ಆಂಡರ್‍ಸನ್, ಷರ್‍ವುಡ್
(1876-1941). ಅಮೆರಿಕದ ಬರೆಹಗಾರ. ಸ್ಪ್ಯಾನಿಷ್ ಅಮೆರಿಕನ್ ಯುದ್ಧದಲ್ಲಿ ಪಾಲುಗೊಂಡು ಅನಂತರ ಕೆಲಕಾಲ ಬಣ್ಣದ ಕಾರ್ಖಾನೆಯೊಂದರ ವ್ಯವಸ್ಥಾಪಕನಾಗಿ ಕೆಲಸ ಮಾಡಿದ. ವಿಂಡಿ ಮೆಕ್ ಫರ್‍ಸನ್ಸ್ ಸನ್ (1916), ಮಾರ್ಚಿಂಗ್ ಮೆನ್ (1917) ಮೊದಲಾದ ಕಾದಂಬರಿಗಳನ್ನು ಬರೆದರೂ ವೈನ್ಸ್‍ಬರ್ಗ್ ಓಹಿಯೊ ಎಂಬ ಕಥಾಸಂಕಲನ ಪ್ರಕಟವಾದ ಮೇಲೆ ಪ್ರಸಿದ್ಧನಾದ. ಪೂರ್‍ವೈಟ್ (1920), ಡಾರ್ಕ್ ಲಾಫ್ಟರ್ (1925), ಪರ್‍ಹ್ಯಾಪ್ಸ್ ವಿಮೆನ್(1931) ಮೊದಲಾದ ಕಾದಂಬರಿಗಳು ಯಂತ್ರಗಳ ಆಗಮನದಿಂದ ನಗರ ಜೀವನದ ನೈರ್ಮಲ್ಯ ಕದಡಿದುದನ್ನೂ ಅವುಗಳನ್ನು ಅವಲಂಬಿಸಿ ಬಿಳಿಯರ ಬದುಕು ಪಕ್ವಹೀನವಾಗುತ್ತಿರುವುದನ್ನು ಅವುಗಳಿಂದ ಪಾರಾಗುವ ಬಗ್ಗೆ ಯಾವುದೆಂಬುದನ್ನೂ ಚಿತ್ರಿಸುತ್ತವೆ. ದಿ ಟ್ರಯಂಫ್ ಆಫ್ ದಿ ಎಗ್ (1921), ಹಾರ್ಸಸ್ ಅಂಡ್ ಮೆನ್ (1923), ಡೆತ್ ಇನ್ ದಿ ವುಡ್ಸ್ (1933)- ಇವು ಆತನ ಕೆಲವು ಕಥಾ ಸಂಗ್ರಹಗಳು. ಹೋಮ್‍ಟೌನ್ ಎಂಬ ಪ್ರಬಂಧ ಸಂಕಲನ ಮರಣಾನಂತರ ಪ್ರಕಟವಾಯಿತು.				    
 
(ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ